ಆನೆಗಳ ನಿಷ್ಠೆ ಮತ್ತು ಜನರೆಡೆಗಿನ ಪ್ರೀತಿಯನ್ನು ಇಲ್ಲಿ ನೋಡಬಹುದು. ಗುಂಪಿನಲ್ಲಿದ್ದ ಚಿಕ್ಕ ಆನೆ ಅರಮನೆ ಆವರಣದಿಂದ ಹೊರಡುವ ಮೊದಲು ನೆರೆದಿದ್ದ ಜನರತ್ತ ನೋಡಿ ಪೊಡಮಟ್ಟುತ್ತದೆ ಅಂದರೆ ಸೊಂಡಿಲೆತ್ತಿ ನಮಸ್ಕಾರ ಮಾಡುತ್ತದೆ. ಜನರಿಗೆ ಕೃತಜ್ಞತೆಯನ್ನು ಸಲ್ಲಿಸುವ ಆನೆಯ ಮನಸ್ಥಿತಿ ಮನಮುಟ್ಟುತ್ತದೆ.