ಬಣ ರಾಜಕೀಯ: ಪಶುಸಂಗೋಪನೆ ಸಚಿವರ ತವರು ಕ್ಷೇತ್ರದಲ್ಲೇ ಹಾಲು ಚರಂಡಿಪಾಲು

ಮೈಸೂರು, ಸೆ.4: ಪಶುಸಂಗೋಪನೆ ಸಚಿವ​ ಕೆ.ವೆಂಕಟೇಶ್ ಅವರ ತವರು ಕ್ಷೇತ್ರ ಪಿರಿಯಪಟ್ಟಣ ತಾಲೂಕಿನಲ್ಲಿ ಬಣ ರಾಜಕೀಯಕ್ಕೆ ಚಿಟ್ಟೇನಹಳ್ಳಿ ಗ್ರಾಮದ ಹೈನುಗಾರರು ಪರದಾಟ ನಡೆಸುವಂತಾಗಿದೆ. ಚಿಟ್ಟೇನಹಳ್ಳಿಯಲ್ಲಿರುವ ಡೇರಿಯಲ್ಲಿ ಕಾರ್ಯದರ್ಶಿ ಹಾಲು ಪಡೆಯದೆ ಮತ್ತೊಂದು ಬಿಎಂಸಿ ಕೇಂದ್ರಕ್ಕೆ ಹಾಲು ಹಾಕುವಂತೆ ತಾಕೀತು ಮಾಡಿದ್ದಾರೆ. ಇದರಿಂದ ದಿಕ್ಕು ತೋದಚೆ ಡೇರಿಗೆ ತಂದ ಹಾಲನ್ನು ಗ್ರಾಮಸ್ಥರು ಚರಂಡಿಗೆ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಸಚಿವ ಕೆ.ವೆಂಕಟೇಶ್ ಕುಮ್ಮಕ್ಕಿನಿಂದ ಕಾರ್ಯದರ್ಶಿ ಹಾಲು ಪಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ. ಒಂದೇ ಡೇರಿಯಲ್ಲಿ ಹಾಲು ಹಾಕಿಸಿಕೊಳ್ಳಬೇಕು ಎಂದು ರೈತರ ಆಗ್ರಹಿಸಿದ್ದಾರೆ.