ತಮ್ಮ ಕುಟುಂಬದ ವಿರುದ್ಧ ಬಂಡಾಯದ ಕಹಳೆ ಮೊಳಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆಎಸ್ ಈಶ್ವರಪ್ಪ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ಯಾವುದೇ ನಾಯಕ ಪಕ್ಷದ ವಿರುದ್ಧ ಬಂಡಾಯ ಪ್ರವೃತ್ತಿ ತೋರಿ ಚುನಾವಣೆಯಲ್ಲಿ ಸ್ಪರ್ಧಿಸುವ ದುಸ್ಸಾಹಸಕ್ಕೆ ಕೈಹಾಕಿರಬಾರದು, ಅಂಥ ಸೋಲನ್ನು ಈಶ್ವರಪ್ಪ ಉಣಿಸಬೇಕಿದೆ ಎಂದರು.