ಬಿಗ್ ಬಾಸ್ ಮನೆಯಲ್ಲಿ ಕಳಪೆ ಎಂಬ ಹಣೆಪಟ್ಟಿ ಪಡೆದವರು ಜೈಲು ಸೇರಬೇಕು. 7ನೇ ವಾರದಲ್ಲಿ ವರ್ತೂರು ಸಂತೋಷ್ ಕಳಪೆ ಆಗಿದ್ದಾರೆ. ಹಾಗಾಗಿ ಅವರನ್ನು ಜೈಲಿಗೆ ಹಾಕಲಾಗಿದೆ. ಜೈಲು ಶಿಕ್ಷೆಯ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ ವರ್ತೂರು ಸಂತೋಷ್ ಅವರು ಎಸ್ಕೇಪ್ ಆಗಿದ್ದಾರೆ. ಇದರಿಂದ ಎಲ್ಲರಿಗೂ ಶಾಕ್ ಆಗಿದೆ. ಈ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಬಿಗ್ ಬಾಸ್ನಲ್ಲಿ ನಿಯಮಗಳು ಸಖತ್ ಕಠಿಣವಾಗಿರುತ್ತವೆ. ಈಗ ಅವರು ಅದನ್ನು ಉಲ್ಲಂಘನೆ ಮಾಡಿದ್ದಾರೆ. ಈ ತಪ್ಪಿಗಾಗಿ ಅವರಿಗೆ ಕಠಿಣ ಶಿಕ್ಷೆ ಆಗುವ ಸಾಧ್ಯತೆ ದಟ್ಟವಾಗಿದೆ. ಈವರೆಗೂ ಜೈಲಿನಿಂದ ಈ ರೀತಿ ಯಾರೂ ಎಸ್ಕೇಪ್ ಆಗಿರಲಿಲ್ಲ. ಇದಕ್ಕೆ ಏನು ಶಿಕ್ಷೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ವರ್ತೂರು ಸಂತೋಷ್ ಅವರ ಈ ಕೃತ್ಯಕ್ಕೆ ತುಕಾಲಿ ಸಂತೋಷ್ ಕುಮ್ಮಕ್ಕು ನೀಡಿದ್ದಾರೆ. ಹಾಗಾಗಿ ಅವರಿಗೂ ಶಿಕ್ಷೆ ಆಗುವ ಸಾಧ್ಯತೆ ಇದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ 24 ಗಂಟೆಯೂ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ನೋಡಬಹುದು. ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಆಗುತ್ತಿದೆ.