ಕಾಂತಾರ ಖ್ಯಾತಿಯ ಕೋಣಗಳಿಗೆ ಚಿನ್ನದ ಪದಕ

ಕಿಟ್ಟು-ಅಪ್ಪು ಕೋಣಗಳ ಮಾಲೀಕ ಪರಮೇಶ್ವರ್ ಭಟ್ ಅವರಂತೂ ಖುಷಿಯಿಂದ ಬೀಗುತ್ತಿದ್ದಾರೆ. ಕರಾವಳಿ ಭಾಗದ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಕಂಬಳ ಮೊದಲ ಬಾರಿಗೆ ಬೆಂಗಳೂರಲ್ಲಿ ಆಯೋಜನೆಗೊಂಡಿದೆ. ಅರಮನೆ ಮೈದಾನದಲ್ಲಿ ನಿರ್ಮಿಸಿರುವ ಟ್ರ್ಯಾಕ್ ಗಳಲ್ಲಿ ಕೋಣಗಳು ಮೈನವಿರೇಳಿಸುವಂತೆ ಓಡುವುದನ್ನು ವೀಕ್ಷಿಸಲು ಲಕ್ಷಗಟ್ಟಲೆ ಜನ ಸೇರಿದ್ದಾರೆ.