ಸೋಮವಾರ ತಡರಾತ್ರಿ ಲಕ್ನೋದ ಲೋಕಬಂಧು ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಬ್ಬ ರೋಗಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಿವಿಲ್ ಆಸ್ಪತ್ರೆ ನಿರ್ದೇಶಕ ರಾಜೇಶ್ ಶ್ರೀವಾಸ್ತವ, ಸುಮಾರು 24 ರೋಗಿಗಳನ್ನು ಚಿಕಿತ್ಸೆಗಾಗಿ ಕರೆತರಲಾಗಿದೆ ಎಂದು ದೃಢಪಡಿಸಿದರು.