‘ಇದು ಕೊರೊನಾಗಿಂತ ದೊಡ್ಡ ಕಾಯಿಲೆ, ಅದಕ್ಕೆ ಮದ್ದು ಇಲ್ಲ’: ದುನಿಯಾ ವಿಜಯ್​

‘ರಿಯಲ್​ ಸ್ಟಾರ್​’ ಉಪೇಂದ್ರ ನಿರ್ದೇಶನ ಮಾಡುತ್ತಿರುವ ‘ಯುಐ’ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿದೆ. ಸೋಮವಾರ (ಸೆಪ್ಟೆಂಬರ್​ 18) ನಡೆದ ಟೀಸರ್​ ಲಾಂಚ್​ ಕಾರ್ಯಕ್ರಮಕ್ಕೆ ದುನಿಯಾ ವಿಜಯ್​ ಅವರು ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮೊಬೈಲ್​ ವ್ಯಸನದ ಬಗ್ಗೆ ಅವರು ಮಾತನಾಡಿದರು. ಅದನ್ನು ಒಂದು ಕಾಯಿಲೆಗೆ ಅವರು ಹೋಲಿಸಿದ್ದಾರೆ. ‘ನಿಜವಾಗಿಯೂ ಯುಐ ಟೀಸರ್​ ವಿಶೇಷವಾಗಿದೆ. ತಲೆ ಬಗ್ಗಿಸಿಕೊಂಡು ಮೊಬೈಲ್​ ನೋಡುವುದು ಕೊರೊನಾಗಿಂತ ದೊಡ್ಡ ಕಾಯಿಲೆ. ಆ ವೈರಸ್​ಗೆ ಯಾವುದೇ ಮದ್ದು ಬರುವುದಿಲ್ಲವೇನೋ. ಮೊಬೈಲ್​ ಬಿಟ್ಟು ಕಲ್ಪನೆಗೆ ಜಾಗ ನೀಡಲು ಈ ಟೀಸರ್ ಸಹಾಯಕ ಆಗುತ್ತದೆ. ಮನೆಗೆ ಹೋಗಿ ನಾನು ಟೀಸರ್​ ನೋಡುತ್ತೇನೆ. ಸಿನಿಮಾ ಹೇಗಿರಬಹುದು ಅಂತ ನಾನೊಂದು ಕಲ್ಪನೆ ಮಾಡಿಕೊಳ್ಳುತ್ತೇನೆ’ ಎಂದು ದುನಿಯಾ ವಿಜಯ್​ ಹೇಳಿದ್ದಾರೆ.