ಸಂಪ್ರದಾಯದಂತೆ ಸೂಟ್ ಕೇಸನ್ನು ಉಮಾಶ್ರೀ ಅವರಿಗೆ ಹೊರಟ್ಟಿನೀಡಿದಾಗ ಅದನ್ನು ಭದ್ರವಾಗಿ ಹಿಡಿದುಕೊಳ್ಳಬೇಕು ಅಂತ ಸಿದ್ದರಾಮಯ್ಯ ಜೋಕ್ ಮಾಡಿದರು. ಅವರು ಹೇಳಿದ್ದನ್ನು ಕೇಳಿಸಿಕೊಂಡ ಉಮಾಶ್ರೀ ಅದೇ ಸೂಟ್ ಕೇಸ್ ಗೆ ಹಣೆಹಚ್ಚಿ ನಕ್ಕರು. ನಿಮಗೆ ನೆನಪಿರಬಹುದು, ಜಗದೀಶ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ಸಿದ್ದರಾಮಯ್ಯ ಸೂಟ್ ಕೇಸ್ ಗೆ ಸಂಬಂಧಿಸಿದಂತೆ ಜೋಕ್ ಮಾಡಿದ್ದರು.