ಬೆಂಗಳೂರು ನಗರದ ಹಲವೆಡೆ ಹಾಲು ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ. ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ನಲ್ಲಿ ತಾಂತ್ರಿಕ ಸಮಸ್ಯೆ. ಲಾರಿಗಳಿಗೆ ಸಿಸ್ಟಮ್ನ ಡೇಟಾ ಪ್ರಕಾರ ಲೋಡ್ ಮಾಡಲು ತೊಂದರೆ ಹಿನ್ನೆಲೆ ಸರಿಯಾದ ಸಮಯಕ್ಕೆ ಲೋಡ್ ಆಗದ ಕಾರಣ ಹಾಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದ್ಯ ಹೈದರಾಬಾದ್ ತಜ್ಞರ ಮೊರೆ ಹೋಗಿರುವ ಬಮೂಲ್ ಅಧಿಕಾರಿಗಳು, ಇಂದು ಬೆಂಗಳೂರಿಗೆ ಆಗಮಿಸಲಿರುವ ಹೈದರಾಬಾದ್ನ ವಿಶೇಷ ತಂಡ, ನಾಳೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.