ಶಾಲೆ ಆವರಣದಲ್ಲಿ ವಾಮಾಚಾರ: ತಲೆ ಬುರುಡೆ, ಲಿಂಬೆ ಹಣ್ಣು, ಎಲೆ ಅಡಿಕೆ, ಕುಂಕುಮ ಪತ್ತೆ -ಆತಂಕ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತಿಮ್ಮಪ್ಪನಹಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಕಿಡಗೇಡಿಗಳು ವಾಮಾಚಾರ ನಡೆಸಿದ್ದಾರೆ. ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕರ ಕೊಠಡಿ ಬಳಿ ವಾಮಾಚಾರ ನಡೆದಿದೆ ತಲೆ ಬುರುಡೆ, ಲಿಂಬೆ ಹಣ್ಣು, ಎಲೆ ಅಡಿಕೆ, ಕುಂಕುಮ ಪತ್ತೆಯಾಗಿದ್ದು, ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು, ‌ಸಿಬ್ಬಂದಿಗೆ ಆತಂಕ ಮೂಡಿದೆ.