ವಿರೋಧ ಪಕ್ಷದ ನಾಯಕ ಅರ್ ಅಶೋಕ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವಾರು ನಾಯಕರು ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಅಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅತ್ತ ಬೆಂಗಳೂರಲ್ಲಿ ಹೇಳಿಕೆಯೊಂದನ್ನು ನೀಡಿರುವ ಖರ್ಗೆ, ಸಚಿನ್ ಪಾಂಚಾಳ್ ಕುಟುಂಬದೊಂದಿಗೆ ತಾನು ಮಾತಾಡಿರುವುದಾಗಿ ಹೇಳಿದ್ದಾರೆ.