ಚಿರು ಫೋಟೋಗೆ ಮುತ್ತು ಕೊಟ್ಟು ಹೂವು ಹಾಕಿದ ರಾಯನ್ ರಾಜ್ ಸರ್ಜಾ

ಇಂದು (ಜೂನ್ 7) ಚಿರಂಜೀವಿ ಅವರ ಪುಣ್ಯತಿಥಿಯನ್ನು ಕುಟುಂಬ ಆಚರಿಸಿದೆ. ಚಿರಂಜೀವಿ ಸಮಾಧಿಗೆ ಭೇಟಿ ನೀಡಿದ ಕುಟುಂಬ ಪೂಜೆ ಸಲ್ಲಿಕೆ ಮಾಡಿದೆ. ಸಮಾಧಿ ಮೇಲೆ ಚಿರುವಿನ ದೊಡ್ಡ ಫೋಟೋ ಇಡಲಾಗಿದೆ. ಈ ಫೋಟೋಗೆ ಮೇಘನಾ ರಾಜ್ ಸರ್ಜಾ ಹೂವು ಹಾಕಿದರು. ರಾಯನ್ ಕೂಡ ಇದನ್ನು ಫಾಲೋ ಮಾಡಿದ. ಆತ ಕೈಯಲ್ಲಿ ಹೂವು ತೆಗೆದುಕೊಂಡು ತಂದೆಯ ಫೋಟೋಗೆ ಹಾಕಿ, ಕಿಸ್ ಕೊಟ್ಟಿದ್ದಾನೆ. ಆ ವಿಡಿಯೋ ಇಲ್ಲಿದೆ.