ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ನಡೆಯುತ್ತಿದ್ದು ನಾಲ್ಕನೆಯ ದಿನವಾದ ಗುರುವಾರ ಶೂನ್ಯವೇಳೆಯಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು. ಈ ವೇಳೆ DCM ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ಇದರಿಂದ ಬೊಮ್ಮಾಯಿ ಮಾತಿಗೆ DCM ಡಿಕೆಶಿಗೂ ನಗು ಬಂತು! ನಮ್ಮ ಉಪಮುಖ್ಯಮಂತ್ರಿಗಳು ಸಾರ್ವಕಾಲಿಕ ಸತ್ಯ ಹೇಳಿದ್ದಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಅಂದಿದ್ದಾರೆ. ಒಂದು ಕಾಲದಲ್ಲಿ ಪವರ್ ಪಾಲಿಟಿಕ್ಸ್ ವೈಟಿಂಗ್ ಗೇಮ್ ಆಗಿತ್ತು. ಈಗ ರಾಜಕಾರಣ ವೈಟಿಂಗ್ ಗೇಮ್ ಆಗಿ ಉಳಿದಿಲ್ಲ. ಯಾರೂ ಅಧಿಕಾರ ಕೊಡಲ್ಲ, ಅಧಿಕಾರ ಬಂದಾಗ ಪಡೆಯಬೇಕು. ಸರಿಯಾದ ರೀತಿಯಲ್ಲಿ ಅಧಿಕಾರ ಪಡೆಯಲು ಚುನಾವಣೆ ಅಂತಾರೆ. ಚುನಾವಣೆ ಇಲ್ಲದಿದ್ದಾಗ ಶಕ್ತಿ ಇದ್ದವನು ಅಧಿಕಾರ ಪಡೆದುಕೊಳ್ತಾನೆ. ಶಕ್ತಿ ಇಲ್ಲದವರು ಅಧಿಕಾರ ಪಡೆದುಕೊಳ್ಳಲ್ಲ ಎಂದು ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದರು.