ರಾಯಚೂರು: ತಾಯಿ, ಮಗನ ಮೇಲೆ ಬೀದಿ ನಾಯಿ ದಾಳಿ; ಭಯ ಹುಟ್ಟಿಸುತ್ತೆ ಸಿಸಿಟಿವಿ ದೃಶ್ಯ

ಜ.4ರ ಸಂಜೆ ಆಸ್ಪತ್ರೆಗೆಂದು ಹೋಗಿದ್ದ ತಾಯಿ, ಮಗನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ತಾಯಿ ಗಂಗಮ್ಮ(36), ಮಗ ಪ್ರೀತಂ(15) ಮೇಲೆ ಬೀದಿ ನಾಯಿ ದಾಳಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೈ ನಡುಗಿಸುವಂತಿದೆ.