ಇಂದು ಮೊದಲ ಶ್ರಾವಣ ಶನಿವಾರ. ನಾಡಿನಾದ್ಯಂತ ಶ್ರಾವಣ ಮಾಸದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ, ಚಾಮುಂಡಿ ತಾಯಿಯ ತವರು ಮೈಸೂರಿನಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಕಳೆಕಟ್ಟಿದೆ. ಮೈಸೂರು ಜಯನಗರ ಬಡಾವಣೆಯ ಶ್ರೀನಿವಾಸ ದೇಗುಲದಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜೆ ನಡೆದಿದೆ. ಶ್ರೀನಿವಾಸನಿಗೆ ಅಭಿಷೇಕ ಮಂಗಳಾರತಿ ಸೇವೆ ನಡೆದಿದೆ. ದೇವಸ್ಥಾನದ ಒಳಗೆ ಹೊರಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಅಂದಹಾಗೆ ನೂರು ವರ್ಷಗಳ ಇತಿಹಾಸ ಈ ದೇವಸ್ಥಾನಕ್ಕೆ ಇದೆ.