ಇಂದು ಅಧಿಕಾರ ವಹಿಸಿಕೊಂಡ ದೆಹಲಿ ಸಿಎಂ, ಸಚಿವರಿಂದ ಯಮುನಾ ಘಾಟ್​ನಲ್ಲಿ ಆರತಿ

ದೆಹಲಿಯ ಮುಖ್ಯಮಂತ್ರಿ, ಸಚಿವರಿಂದ ಯಮುನಾ ನದಿಯ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿ ನೆರವೇರಿಸಲಾಗುತ್ತಿದೆ. ಈ ವೇಳೆ ದೆಹಲಿ ಮುಖ್ಯಮಂತ್ರಿ, ಅವರ ಸಂಪುಟ ಸಚಿವರು ಮತ್ತು ದೆಹಲಿಯ ಬಿಜೆಪಿ ಸಂಸದರು ಸಹ ಹಾಜರಿದ್ದರು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಅವರ ಸಚಿವರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಹರಿದ್ವಾರ ಮತ್ತು ವಾರಾಣಸಿಯ ಗಂಗಾ ಘಾಟ್‌ಗಳಲ್ಲಿ ದೈನಂದಿನ ಸಂಜೆ ಸಮಾರಂಭದಿಂದ ಪ್ರೇರಿತರಾಗಿ ವಾಸುದೇವ್ ಘಾಟ್‌ನಲ್ಲಿ ಯಮುನಾ ನದಿಯ "ಆರತಿ"ಯಲ್ಲಿ ಭಾಗವಹಿಸಿದ್ದಾರೆ.