ಭಾನುವಾರದ ಎಪಿಸೋಡ್ನಲ್ಲಿ, ಪರಸ್ಪರರ ಮೇಲಿನ ಸಿಟ್ಟು ತೀರಿಸಿಕೊಳ್ಳುವ ಅವಕಾಶವನ್ನು ಸುದೀಪ್, ಮನೆಯ ಸ್ಪರ್ಧಿಗಳಿಗೆ ನೀಡಿದ್ದರು. ಬಾಕ್ಸಿಂಗ್ ಬ್ಯಾಗ್ಗೆ ತಮಗೆ ಆಗದವರ ಚಿತ್ರವನ್ನು ಅಂಟಿಸಿ, ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡು ಗುದ್ದಬೇಕಿತ್ತು. ಹೆಚ್ಚು ಏಟು ಬಿದ್ದಿದ್ದು ರಜತ್ ಮತ್ತು ಉಗ್ರಂ ಮಂಜುಗೆ. ಉಗ್ರಂ ಸಹ ಬಹಳ ಸಿಟ್ಟಿನಿಂದಲೇ ಬಾಕ್ಸಿಂಗ್ ಬ್ಯಾಗ್ಗೆ ಹೊಡೆದಿದ್ದಾರೆ.