‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಆರೋಗ್ಯದಲ್ಲಿ ಇಂದು (ಜೂನ್​ 18) ಏರುಪೇರು ಆಗಿತ್ತು. ಹಾಗಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಪವಿತ್ರಾ ಗೌಡ ಅವರ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಿದ ವೈದ್ಯರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪವಿತ್ರಾ ಗೌಡ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಲು ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಪ್ರತಿದಿನ ಚೆಕಪ್​ಗೆ ಹೋಗುತ್ತೇವೆ. ಪವಿತ್ರಾ ಗೌಡ ಬೆಳಗ್ಗೆಯಿಂದ ಆಹಾರ ಸೇವಿಸಿಲ್ಲ. ಹಾಗಾಗಿ, ಗ್ಲೂಕೋಸ್​ ಲೆವೆಲ್​ ಕಡಿಮೆ ಇತ್ತು. ಐವಿ ಫ್ಯೂಯಿಡ್​ ಹಾಕಿದ್ದೇವೆ. ಸ್ವಲ್ಪ ಗ್ಯಾಸ್​ಟ್ರೈಟಿಸ್​ ಇತ್ತು. ಅದನ್ನು ಹೊರತು ಪಡಿಸಿದರೆ ಅವರು ಚೆನ್ನಾಗಿದ್ದಾರೆ. ಸ್ವಲ್ಪ ಲೋ ಬಿಪಿ ಆಗಿತ್ತು. ಎಲ್ಲ ಆರೋಪಿಗಳ ಆರೋಗ್ಯ ಚೆನ್ನಾಗಿದೆ. ಏನೂ ತೊಂದರೆ ಇಲ್ಲ’ ಎಂದು ವೈದ್ಯರು ಹೇಳಿದ್ದಾರೆ. ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಹತ್ಯೆ ಮಾಡಿದ ಆರೋಪ ದರ್ಶನ್​ ಮತ್ತು ಗ್ಯಾಂಗ್​ ಮೇಲಿದೆ.