ಸಂಗೀತಾ ವಿರುದ್ಧವೇ ಕಾರ್ತಿಕ್​, ತನಿಷಾ ಸಂಚು? ಇಷ್ಟು ದಿನದ ಸಂಬಂಧ, ನಂಬಿಕೆ ಈಗ ಅಂತ್ಯ

ಪ್ರತಿ ದಿನವೂ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಹೊಸ ಹೊಸ ಟ್ವಿಸ್ಟ್​ ಸಿಗುತ್ತಿದೆ. ಇಷ್ಟು ದಿನಗಳ ಕಾಲ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ಮಧ್ಯೆ ಒಂದು ಒಡನಾಟ ಬೆಳೆದಿತ್ತು. ಇಬ್ಬರ ನಡುವೆ ನಂಬಿಕೆ ಇತ್ತು. ಆದರೆ ಈಗ ಆ ನಂಬಿಕೆಗೆ ಪೆಟ್ಟು ಬಿದ್ದಂತಿದೆ. ನಾಮಿನೇಷನ್​ ವಿಚಾರದಲ್ಲಿ ಸಂಗೀತಾ ಶೃಂಗೇರಿ ಅವರ ಬೆನ್ನ ಹಿಂದೆ ಸಂಚು ನಡೆದಿದೆ. ಅವರನ್ನು ಸೇವ್​ ಮಾಡಬಾರದು ಎಂದು ಕೆಲವರು ಹುನ್ನಾರ ನಡೆಸಿದ್ದಾರೆ. ಅದು ಸಂಗೀತಾ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಕಾರ್ತಿಕ್​ ಮಹೇಶ್​, ವರ್ತೂರು ಸಂತೋಷ್​, ತನಿಷಾ ಕುಪ್ಪಂಡ ಅವರ ಬಳಿ ಇದನ್ನು ಸಂಗೀತಾ ಚರ್ಚಿಸಿದ್ದಾರೆ. ‘ಇಷ್ಟು ದಿನ ನಮ್ಮಲ್ಲಿ ಒಂದು ಫ್ರೆಂಡ್​ಶಿಪ್​, ನಂಬಿಕೆ ಇತ್ತು. ಅದು ಈಗ ಬ್ರೇಕ್​ ಆಗಿದೆ’ ಎಂದು ಸಂಗೀತಾ ಮುಲಾಜಿಲ್ಲದೇ ಹೇಳಿದ್ದಾರೆ. ನ.16ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ 24 ಗಂಟೆಯೂ ಲೈವ್​ ನೋಡಬಹುದು.