ನೋಡಿ, ಇಲ್ನೋಡಿ, ಬಾಲಕಿಯ ಬೆನ್ನು, ಕಪಾಳಕ್ಕೆ ಹೊಡೀತಿದ್ದಾನೆ. ತಲೆ ಜುಟ್ಟು ಹಿಡಿದು ಎಳೆಯುತ್ತಿದ್ದಾನೆ. ಮೇಲೇಳಲು ಯತ್ನಿಸ್ತಿರೋ ಬಾಲಕಿಯನ್ನು ಕಾಲಿನಿಂದ ಒದೀತಿದ್ದಾನೆ. ಈ ಎಲ್ಲ ದೃಶ್ಯಗಳು ಬೆಂಗಳೂರಿನ ಮದರಸಾವೊಂದರಲ್ಲಿ ಬಾಲಕಿಯರ ಮೆಲೆ ಪಾಪಿಯೊಬ್ಬ ಕ್ರೌರ್ಯ ಮೆರೆಯುತ್ತಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಸದ್ಯ ಈ ಸಿಟಿಟಿವಿ ದೃಶ್ಯ ವೈರಲ್ ಆಗುತ್ತಿದೆ.