ಔರಾದ್: 13 ಕೋಟಿ ವೆಚ್ಚದ ಗೋದಾಮು ಅರ್ಧಕ್ಕೆ ನಿಲ್ಲಿಸಿ, ಗುತ್ತಿಗೆದಾರ ಪಲಾಯನ ಮಾಡಿ 7 ವರ್ಷವಾಗಿದೆ!

ರೈತರು ಬೆಳೆಸಿದ ದವಸ ಧಾನ್ಯವನ್ನ ಸಂಗ್ರಹಿಸಲು ಅಲ್ಲಿ ಗೋದಾಮು ನಿರ್ಮಾಣ ಮಾಡಲಾಗುತ್ತಿತ್ತು. 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಬೃಹತ್ ಗೋದಾಮು ಅರ್ಧಂಬರ್ಧ ಕಾಮಗಾರಿ ಮಾಡಿ ಗುತ್ತಿಗೆದಾರ ಪಲಾಯನ ಮಾಡಿದ್ದಾನೆ. ಹೀಗಾಗಿ ಆರು ವರ್ಷದಿಂದ ಕೆಲಸ ಅರ್ಧಕ್ಕೆ ನಿಂತಿದ್ದು ಕೊಟ್ಯಾಂತರ ರೂಪಾಯಿ ವ್ಯರ್ಥವಾಗಿದ್ದು ರೈತರ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ... ಅರ್ಧಕ್ಕೆ ನಿಂತ ಗೋದಾಮು ಕಾಮಗಾರಿ ತನಿಖೆ ಮಾಡುವಂತೆ ಲೋಕಾಯುಕ್ತಕ್ಕೂ ದೂರು, ಹೈಕೋರ್ಟ್ ನಲ್ಲಿಯೂ ಸಾರ್ವಜನಿಕರ ಹಿತಾಸಕ್ತ ಅರ್ಜಿ ಸಲ್ಲಿಕೆಯಾಗಿದೆ. ರೈತರು ಬೆಳೆಸಿದ ಬೆಳೆ ಸಂಗ್ರಹಿಸಿಡಲು ಬೃಹತ್ ಮಟ್ಟದ 2 ಗೋದಾಮು ಕಾಮಗಾರಿ ಅರ್ಧಕ್ಕೆ 13 ಕೋಟಿ ರೂಪಾಯಿ ವೆಚ್ಚದ ಎರಡು ಗೋದಾಮು.. (Godown, Warehouse) ಅರ್ಧಕ್ಕೆ ನಿಂತು ಏಳು ವರ್ಷ ಕಳೆದರೂ ಮುಗಿಯದ ಕಾಮಗಾರಿಯಾಗಿದೆ. ಹೌದು ಬೀದರ್ ಜಿಲ್ಲೆಯ ಔರಾದ್ ಪಟ್ಣದಲ್ಲಿ (Aurad, Bidar) 2015-16 ನೇ ಸಾಲಿನಲ್ಲಿ 13 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಉಗ್ರಾಣ ನಿಗಮದಿಂದ ಔರಾದ್ ಪಟ್ಟಣದ ರೈತ ಭವನದ ಹಿಂದೆ ಎರಡು ಬೃಹತ್ತಾದ ಗೋದಾಮು ನಿರ್ಮಾಣ ಕಾಮಗಾರಿ ಕೈಗೆತ್ತುಕೊಳ್ಳಲಾಗಿತ್ತು.