ಒಡಿಶಾದಲ್ಲಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ, 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಂಗುಲ್‌ನಿಂದ ಬರಿಪಾಡಾಗೆ ತೆರಳುತ್ತಿದ್ದ ಬಸ್ 50 ರಿಂದ 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದಾಗ ರಸ್ತೆಯಿಂದ ಸ್ಕಿಡ್ ಆಗಿದೆ. ಭಾನುವಾರ ಅಂಗುಲ್ ಜಿಲ್ಲೆಯ ಗಹಾಮ್ ಬಳಿ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (OSRTC) ಬಸ್ ಪಲ್ಟಿಯಾಗಿತ್ತು.