‘ಈ 10 ವರ್ಷದಲ್ಲಿ ರಚಿತಾಗಿಂತ ಸುಂದರ ನಟಿಯನ್ನು ನಾನು ನೋಡಿಲ್ಲ’: ಸಾಧು ಕೋಕಿಲ

ರಚಿತಾ ರಾಮ್​, ಶ್ರೀನಗರ ಕಿಟ್ಟಿ, ಸಾಧು ಕೋಕಿಲ ಮುಂತಾದ ಕಲಾವಿದರು ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಾಧು ಕೋಕಿಲ ಅವರು ಮಾತನಾಡಿದ್ದಾರೆ. ಈ ಚಿತ್ರಕ್ಕೆ ನಾಗಶೇಖರ್​ ನಿರ್ದೇಶನ ಮಾಡುತ್ತಿದ್ದಾರೆ. ‘ರಮ್ಯಾ ಅವರು ಚೆನ್ನಾಗಿ ಇದ್ದರು. ಹಾಗಾಗಿ ಅವರನ್ನು ಚೆನ್ನಾಗಿ ತೋರಿಸಲಾಗಿತ್ತು. ಇತ್ತೀಚಿನ 8ರಿಂದ 10 ವರ್ಷಗಳಲ್ಲಿ ರಚಿತಾ ರಾಮ್​ ಅವರಿಗಿಂತಲೂ ಬ್ಯೂಟಿಫುಲ್​ ಆದ ನಟಿಯನ್ನು ನಾನು ನೋಡಿಲ್ಲ. ಹಾಗಾಗಿ ಅವರನ್ನು ಕೂಡ ನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ’ ಎಂದು ಸಾಧು ಕೋಕಿಲ ಹೇಳಿದ್ದಾರೆ.