ಗಾಲಿ ಜನಾರ್ಧನ ರೆಡ್ಡಿ ವಿರುದ್ಧ ನೇರವಾಗಿ ಸಮರ ಸಾರುವ ಮೂಲಕ ಶ್ರೀರಾಮುಲು ಸುದ್ದಿಯಲ್ಲಿದ್ದಾರೆ. ಸೋಜಿಗದ ಸಂಗತಿಯೆಂದರೆ ಅವರು ಬಿಜೆಪಿಯ ರಾಜ್ಯಾಧ್ಯಕ್ಷನಾಗುವ ಇಂಗಿತ ವ್ಯಕ್ತಪಡಿಸಿದ್ದು. ಕೋಲಾರದಲ್ಲಿ ಮಾಧ್ಯಮದವರ ಜೊತೆ ಮಾತಾಡಿದ್ದ ಅವರು ತಾನು ಬಿಎಸ್ ಯಡಿಯೂರಪ್ಪನವರ ಕುಟುಂಬದ ಒಂದು ಭಾಗ ಮತ್ತು ವಿಜಯೇಂದ್ರ ತನಗೆ ತಮ್ಮನಿದ್ದಂತೆ ಎಂದು ಹೇಳಿದ್ದರು.