‘ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರ ಮೇಲೆ ಹುಲಿ ಉಗುರು ಹೊಂದಿರುವ ಆರೋಪ ಬಂತು. ಅವರನ್ನು ಬಂಧಿಸಲಾಯಿತು. ಆ ಬಳಿಕ ಅವರು ದೊಡ್ಮನೆಗೆ ಮರಳಿದ್ದಾರೆ. ಬಿಗ್ ಬಾಸ್ಗೆ ರೀ ಎಂಟ್ರಿ ಪಡೆಯುತ್ತಿದ್ದಂತೆ ಸಂತೋಷ್ ಮದುವೆ ಆಗಿದ್ದ ವಿಚಾರ ಚರ್ಚೆಗೆ ಬಂತು. ದೊಡ್ಮನೆಯಲ್ಲಿ ಸಂತೋಷ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ದೊಡ್ಡಪ್ಪ ತೋರಿಸಿದ ಹುಡುಗಿಗೆ ತಾಳಿ ಕಟ್ಟುತ್ತೇನೆ ಎಂದೆ. ಅದರಂತೆ ನಡೆದುಕೊಂಡೆ. ಮದುವೆ ಆದ ಹುಡುಗಿ ನನ್ನ ತಾಯಿಯನ್ನು ಕಡೆಗಣಿಸಲು ಆರಂಭಿಸಿದರು. ಹೀಗಾಗಿ, ನಾನು ಪತ್ನಿಯಿಂದ ದೂರ ಆದೆ’ ಎಂದಿದ್ದಾರೆ ಸಂತೋಷ್.