ನಿನ್ನೆ ಬಳ್ಳಾರಿಯಲ್ಲಿ ಶಾಸಕರು ಮತ್ತು ಸಂಸದರ ಮನೆಗಳ ಈಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದನ್ನು ಗೃಹ ಸಚಿವ ಅದೊಂದು ಮಾಮೂಲೀ ವಿಷಯವೆಂಬಂತೆ ಮಾತಾಡಿದರು. ರಾಜ್ಯ ಸರ್ಕಾರ ಎಸ್ಐಟಿಯನ್ನು ರಚಿಸಿ ತನಿಖೆ ಮಾಡಿಸಿದೆ, ಚಾರ್ಜ್ಶೀಟ್ ಸಲ್ಲಿಕೆಯ ಜೊತೆ ಹಣವನ್ನು ಸಹ ಸಂಪೂರ್ಣವಾಗಿ ರಿಕವರಿ ಮಾಡಲಾಗಿದೆ, ಈಡಿ ಅಧಿಕಾರಿಗಳಿಗೆ ಮತ್ಯಾವ ಮಾಹಿತಿ ಇದೆಯೋ ಗೊತ್ತಿಲ್ಲ ಎಂದು ಅವರು ಹೇಳಿದರು.