ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್

ನಿಕೋಲಸ್ ಪೂರನ್... ಲಕ್ನೋ ಸೂಪರ್‌ಜೈಂಟ್ಸ್ ಈ ಆಟಗಾರನಿಗೆ 21 ಕೋಟಿ ರೂಪಾಯಿಗಳನ್ನು ಏಕೆ ನೀಡಿತು ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಕೆಕೆಆರ್ ವಿರುದ್ಧ ಕೇವಲ 36 ಎಸೆತಗಳಲ್ಲಿ 87 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ ಮತ್ತು 7 ಬೌಂಡರಿಗಳನ್ನು ಬಾರಿಸಿದ ಪೂರನ್ ಅವರ ಇನ್ನಿಂಗ್ಸ್​ನ ಆಧಾರದ ಮೇಲೆ ಲಕ್ನೋ ತಂಡ 20 ಓವರ್‌ಗಳಲ್ಲಿ 238 ರನ್ ಗಳಿಸಿತು.