ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ

ಮುಂಗಾರು ಮಳೆ ಅಬ್ಬರ ಜೋರಾಗಿರುವುದು ಮತ್ತು ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರ ಪರಿಣಾಮ ಬೆಳಗಾವಿ ಮೇಲಾಗಿದೆ. ಜಿಲ್ಲೆಯಲ್ಲಿ ಕೃಷ್ಣಾ, ದೂದಗಂಗಾ ನದಿ ಪ್ರವಾಹದೋಪಾದಿಯಲ್ಲಿ ಹರಿಯುತ್ತಿದ್ದು, ಚಿಕ್ಕೋಡಿ ವ್ಯಾಪ್ತಿಯ 7 ಸೇತುವೆಗಳು ಮುಳುಗಡೆಯಾಗಿವೆ. ಪರಿಣಾಮವಾಗಿ ಜನರು ಸಂಚಾರಕ್ಕೆ ಪರ್ಯಾಯ ಮಾರ್​ಗಗಳನ್ನು ಅವಲಂಬಿಸಬೇಕಾಗಿ ಬಂದಿದೆ. ಬೆಳಗಾವಿ ಪ್ರವಾಹದ ವಿಡಿಯೋ ಇಲ್ಲಿದೆ.