ಅಗಲಿದ ಗಣ್ಯರಿಗೆ ಸಿದ್ದರಾಮಯ್ಯರಿಂದ ಶ್ರದ್ಧಾಂಜಲಿ

ದ್ವಾರಕೀಶ್ ಅವರ ಬಗ್ಗೆ ಮಾತಾಡಿದ ಸಿದ್ದರಾಮಯ್ಯ, ಮೆಕ್ಯಾನಿಕಲ್ ಎಂಜಿನೀಯರ್ ಆಗಿದ್ದರೂ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೈಸೂರಿನ ದ್ವಾರಕೀಶ್, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು, ಸ್ನೇಹಜೀವಿಯಾಗಿದ್ದರು ಮತ್ತು ಒಮ್ಮೆ ಅಸೆಂಬ್ಲಿ ಚುನಾವಣೆಗೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು ಎಂದು ಹೇಳಿದರು.