‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜೂ ಇಲ್ಲದೇ ನೇರವಾಗಿ ಹೇಳಿದ ಸಂಗೀತಾ ಶೃಂಗೇರಿ

ನಟಿ ಸಂಗೀತಾ ಶೃಂಗೇರಿ ಅವರದ್ದು ನೇರ ನಡೆ-ನುಡಿಯ ವ್ಯಕ್ತಿತ್ವ. ಯಾರಿಗೂ ಜಗ್ಗದ ರೀತಿಯಲ್ಲಿ ಅವರು ಬಿಗ್​ ಬಾಸ್​ ಮನೆಯಲ್ಲಿ ಆಟ ಆಡುತ್ತಿದ್ದಾರೆ. ಇತ್ತೀಚೆಗಿನ ಟಾಸ್ಕ್​ನಲ್ಲಿ ಅವರ ಕಣ್ಣಿಗೆ ತೊಂದರೆ ಉಂಟಾಯಿತು. ಅದಕ್ಕಾಗಿ ಅವರು ಚಿಕಿತ್ಸೆ ಪಡೆದು ವಾಪಸ್​ ಬಿಗ್​ ಬಾಸ್​ ಮನೆಯೊಳಗೆ ಬಂದಿದ್ದಾರೆ. ಆ ಬಳಿಕ ಅವರಲ್ಲಿ ಛಲ ಹೆಚ್ಚಾಗಿದೆ. ‘ಸೂಪರ್​ ಸಂಡೇ ವಿತ್​ ಸುದೀಪ’ ಸಂಚಿಕೆಯಲ್ಲಿ ಸಂಗೀತಾ ಅವರು ನೇರವಾಗಿ ಕೆಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ‘ಅವರು ಗಲೀಜಿನಲ್ಲಿ ಇದ್ದಾರೆ. ಅವರಿಗೆ ಲೋಕವೆಲ್ಲ ಗಲೀಜಾಗಿಯೇ ಕಾಣಿಸುತ್ತಿದೆ’ ಎಂದು ಸಂಗೀತಾ ಹೇಳಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಡಿಸೆಂಬರ್​ 10ರ ರಾತ್ರಿ 9 ಗಂಟೆಗೆ ಈ ಎಪಿಸೋಡ್​ ಪ್ರಸಾರ ಆಗಲಿದೆ. 24 ಗಂಟೆಯೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಲೈವ್​ ವೀಕ್ಷಿಸಬಹುದು.