ಯಾರಾದರೂ ಬಿಜೆಪಿ ಬಾವುಟ ಹಿಡಿದುಕೊಂಡು ತಿರುಗಾಡುತ್ತಿರುವುದು ವಾಟ್ಟ್ಯಾಪ್ ನಲ್ಲಿ ಕಂಡರೆ ಸಹೋದರರು ಅದನ್ನು ಜೂಮ್ ಮಾಡಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳಿಸುತ್ತಾರೆ. ಕಾಂಗ್ರೆಸ್ ಪರ ಕೆಲಸ ಮಾಡುವುದಾದರೆ ಆರ್ ಅರ್ ನಗರದಲ್ಲಿರಬಹುದು, ಇಲ್ಲಾಂದ್ರ ಊರು ಬಿಟ್ಟು ಹೋಗ್ತಾ ಇರು ಅಂತ ಅವನಿಗೆ ಧಮ್ಕಿ ಹಾಕಲಾಗುತ್ತದೆ ಎಂದು ಮುನಿರತ್ನ ಹೇಳಿದರು. ಇದು ಆದಷ್ಟು ಬೇಗ ಕೊನೆಗೊಳ್ಳಲಿದೆ, ಅಲ್ಲಿಯವರಗೆ ಕಾಯಬೇಕು ಎಂದು ಅವರು ಹೇಳಿದರು.