ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗುತ್ತಿದ್ದಾರೆ

ಚಾಮುಂಡಿ ದೇವಿಯ ದರ್ಶನಕ್ಕಾಗಿ ಹಣ ತೆತ್ತವರಿಗೆ, ದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿ ಹಾಲು ನೀಡುವ ಭರವಸೆ ನೀಡಲಾಗಿತ್ತಂತೆ, ಅದರೆ ಒಂದನ್ನೂ ನೀಡಿಲ್ಲ ಎಂದು ಒಬ್ಬ ಭಕ್ತ ಹೇಳುತ್ತಾರೆ. ಕುಡಿಯುವ ನೀರಿನ ವ್ಯವಸ್ಥೆಯೂ ಬೆಟ್ಟದಲ್ಲಿಲ್ಲ. ವಿಐಪಿಗಳೆಂದು ಹೇಳಿಕೊಂಡು ನುಗ್ಗುವವರಿಂದ ಬೇರೆಯವರಿಗೆ ಅಪಾಯವಿದೆ. ಸಾಕಷ್ಟು ಪ್ರಮಾಣದಲ್ಲಿ ನಿಯೋಜನೆಗೊಂಡಿರುವ ಪೊಲೀಸರು ಇಂಥವರನ್ನು ಮುಲಾಜಿಲ್ಲದೆ ದಂಡಿಸಬೇಕು.