ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆಗೆ ದರ್ಶನ್ ತೂಗುದೀಪ ಗೈರಾಗಿದ್ದರು. ಆದರೆ ಪವಿತ್ರಾ ಸೇರಿದಂತೆ ಇತರೆ ಆರೋಪಿಗಳೆಲ್ಲ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ನ್ಯಾಯಾಲಯದ ಮುಂದೆ ಪವಿತ್ರಾ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ನೂಕಾಟ-ತಳ್ಳಾಟದ ನಡುವೆ ನಗುತ್ತಲೇ ಮಾಧ್ಯಮದವರನ್ನು ಮಾತನಾಡಿಸಿದರು ಪವಿತ್ರಾ.