ಸಂತೋಷನ ಮಕ್ಕಳ ಹೆಸರಲ್ಲಿ ಸಿದ್ದೇಶ್ವರ ಬ್ಯಾಂಕಲ್ಲಿ ₹ 5 ಲಕ್ಷ ಡಿಪಾಸಿಟ್ ಮಾಡಿಸುತ್ತೇನೆ, ತಿಂಗಳಿಗೆ ಸುಮಾರು ₹5,000 ಬಡ್ಡಿ ಅವರಿಗೆ ಸಿಗುತ್ತದೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎದು ಹೇಳಿದ ಯತ್ನಾಳ್, ಅಗಲಿದ ಕಾರ್ಯಕರ್ತನ ಸಹೋದರನಿಗೆ ಬಿಎಂಟಿಸಿಯಲ್ಲಿ ನೌಕರಿ ಸಿಕ್ಕಿದೆ, ಅವನು ನೌಕರಿಗೆ ಹೋಗುವುದು ಬೇಡ, ಅಣ್ಣ ಮಾಡುತ್ತಿದ್ದ ಟಿಸಿ ರಿಪೇರಿ ಕೆಲಸ ಮುಂದುವರಿಸಿಕೊಂಡು ಹೋಗಲಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದರು.