ರಾಮನವಮಿ: ಅಯೋಧ್ಯೆಯಲ್ಲಿ ಬಾಲ ರಾಮನ ಹಣೆ ಸ್ಪರ್ಶಿಸಿದ ಸೂರ್ಯ ರಶ್ಮಿ

ಇಂದು ರಾಮನವಮಿ, ದೇಶಾದ್ಯಂತ ಹಿಂದೂಗಳು ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಇಂದು ಅಯೋಧ್ಯೆಯಲ್ಲಿರುವ ಬಾಲ ರಾಮನ ಹಣೆಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ದೇಶ ಮತ್ತು ಪ್ರಪಂಚದ ಕೋಟ್ಯಂತರ ಜನರು ಈ ಅದ್ಭುತ ದೃಶ್ಯವನ್ನು ವೀಕ್ಷಿಸಿದರು. ರಾಮ ಮಂದಿರದಲ್ಲಿ ಆರತಿಯನ್ನು ನೆರವೇರಿಸಲಾಯಿತು.