ಹುಲಿ ಸಂಖ್ಯೆಯಲ್ಲಿ ಕರ್ನಾಟಕಕ್ಕೆ 2ನೆಯ ಸ್ಥಾನವಾ? ಯಾಕೋ ಅನುಮಾನ ಬರುತ್ತಿದೆ

ಮೊನ್ನೆ‌ ಮೊನ್ನೆಯಷ್ಟೆ ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರ ಹುಲಿಗಣತಿ ವರದಿ ಬಿಡುಗಡೆ ಮಾಡಿದೆ.‌ ಆದ್ರೆ ಆ ವರದಿ ಬಿಡುಗಡೆಯಾದ ಮೇಲೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ನಂಬರ್ ಒನ್ ಪಟ್ಟಕ್ಕೆ ಪೈಪೋಟಿ ಇದ್ದ ಕರ್ನಾಟಕ್ಕೆ ಮತ್ತೆ ನಿರಾಸೆಯಾಗಿದೆ. ಅದಷ್ಟೆ ಅಲ್ಲದೆ ವರದಿಯಲ್ಲಿರುವ ಅಂದಾಜು ಹುಲಿಗಳ ಸಂಖ್ಯೆಯೆ ಬಗ್ಗೆ ಹಲವು ಅನುಮಾನಗಳು ಮೂಡಿದೆ. ಹೌದು, ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನ ಆಚರಣೆ ಮಾಡಲಾಗುತ್ತೆ.‌ಈ ದಿನ ಭಾರತದಲ್ಲಿ 2022 ರಲ್ಲಿ ನಡೆಸಿದ ಹುಲಿ ಗಣತಿ ವರದಿಯನ್ನ ಕೇಂದ್ರ ಪರಿಸರ ಇಲಾಖೆ ಬಿಡುಗಡೆ ಮಾಡಿದೆ. ಇಲಾಖೆ ಬಿಡುಗಡೆ ಮಾಡಿರುವ ಹುಲಿ ಗಣತಿ ವರದಿ ಖುಷಿ ಪಡುವ ವಿಚಾರವಾಗಿದೆ. ಆದ್ರೆ ಕರ್ನಾಟಕದ ವಿಚಾರಕ್ಕೆ ಬಂದ್ರೆ ಈ ವರದಿ ಒಂದಷ್ಟು ನಿರಾಸೆ ಮೂಡಿಸಿದೆ. ಈ ವರದಿ ಬಗ್ಗೆಯೇ ಅನುಮಾನ‌ವೂ ಮೂಡವಂತಾಗಿದೆ. ಇಷ್ಟಕ್ಕೆಲ್ಲ ಕಾರಣ ಅಂದ್ರೆ‌ 2018 ರ ವರದಿ ಹಾಗೂ 2022 ರ ವರದಿಯಲ್ಲಿ ಕಂಡು ಬಂದ ಹುಲಿಗಳ ಸಂಖ್ಯೆಯಲ್ಲಿನ ವ್ಯತ್ಯಾಸ. 2018 ರಲ್ಲಿ ಕರ್ನಾಟಕದಲ್ಲಿ 524 ಹುಲಿಗಳಿಂದ ದೇಶದಲ್ಲಿ ಎರಡನೇ ಅತಿ ಹೆಚ್ಚು ಹುಲಿ ಹೊಂದಿರುವ ರಾಜ್ಯ ಎನಿಸಿಕೊಂಡಿತು. ಅದ್ರಲ್ಲು ನಂಬರ್ 1 ಪಡೆದ ಮಧ್ಯಪ್ರದೇಶಕ್ಕೂ ರಾಜ್ಯಕ್ಕೂ ಕೇವಲ 2 ಹುಲಿಗಳಷ್ಟೆ ವ್ಯತ್ಯಾಸ ಇತ್ತು. 2018 ರಲ್ಲಿ ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದವು. ‌ಈ ಬಾರಿ ಬಿಡುಗಡೆ ಮಾಡಿದ ವರದಿಯಲ್ಲಿ ರಾಜ್ಯಕ್ಕೂ ಮಧ್ಯಪ್ರದೇಶಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಕರ್ನಾಟಕದಲ್ಲಿ 563 ಹುಲಿಗಳಿದ್ರೆ ಮಧ್ಯಪ್ರದೇಶದಲ್ಲಿ 785 ಹುಲಿಗಳಿವೆ ಅಂತ ವರದಿ ತಿಳಿಸಿದೆ. ಕರ್ನಾಟಕದಲ್ಲಿ ಕೇವಲ 39 ಹುಲಿಗಳು ಹೆಚ್ಚಾಗಿದ್ರೆ, ಮಧ್ಯಪ್ರದೇಶದಲ್ಲಿ 259 ಹುಲಿಗಳು ಹೆಚ್ಚಾಗಿರೋದು ಹೇಗೆ ಅಂತ ಅನುಮಾನ ಮೂಡಿದೆ. ಈ ಬಗ್ಗೆ ಪರಿಸರವಾದಿ, ಹಿರಿಯ ಪತ್ರಕರ್ತ ಜೋಸೆಫ್ ಹೂವರ್ ಅನುಮಾನ ವ್ಯಕ್ತಪಡಿಸಿದ್ದಾರೆ.