ಹೆಚ್ ಡಿ ದೇವೇಗೌಡ ಪ್ರಚಾರಕ್ಕೆ ಬಂದಿದ್ದು ಮತ್ತು ಕುಮಾರಸ್ವಾಮಿಯವರನ್ನು ಜಮೀರ್ ಅಹ್ಮದ್ ಕರಿಯ ಅಂತ ಕರೆದಿದ್ದು ಎದುರಾಳಿಗಳಿಗೆ ಹಿನ್ನಡೆಯಾಗುತ್ತಾ ಅಂತ ಕೇಳಿದ್ದಕ್ಕೆ ಉತ್ತರಿಸಿದ ನಿಖಿಲ್, ಪ್ರತಿಸ್ಪರ್ಧಿಗಳ ಕಾಮೆಂಟ್ಗಳಿಗೆ ಉತ್ತರಿಸುವ ಗೋಜಿಗೆ ತಾವ್ಯಾರೂ ಹೋಗಿಲ್ಲ, ಆದರೆ ಅವರಿಗೆಲ್ಲ ಮತದಾರ ಉತ್ತರಿಸಿದ್ದಾನೆ ಎಂಬ ವಿಶ್ವಾಸ ತನಗಿದೆ ಎಂದರು.