‘ಮೈ ಮುಟ್ಟಬೇಡ’; ಕಾರ್ತಿಕ್ ಹಾಗೂ ವಿನಯ್ ಮಧ್ಯೆ ದ್ವೇಷದ ಬೆಂಕಿ

ಬಿಗ್ ಬಾಸ್ ಮನೆ ಒಂದೇ ತಿಂಗಳಲ್ಲಿ ರಣರಂಗವಾಗಿ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಈ ವಾರ ಭಿನ್ನವಾದ ಟಾಸ್ಕ್ನ ನೀಡಿದ್ದಾರೆ ಬಿಗ್ ಬಾಸ್. ದೊಡ್ಮನೆಯ ಗಾರ್ಡನ್ ಏರಿಯಾದಲ್ಲಿ ಹಳ್ಳಿಯ ಸೆಟ್ ಹಾಕಲಾಗಿದೆ. ಸ್ಪರ್ಧಿಗಳು ಅಲ್ಲಿಯೇ ವಾಸ ಮಾಡಬೇಕು. ಮನೆಯಲ್ಲಿರುವ ಸ್ಪರ್ಧಿಗಳನ್ನು ಎರಡು ಗುಂಪನ್ನಾಗಿ ಬಿಗ್ ಬಾಸ್ ಮಾಡಿದ್ದು, ಒಂದಕ್ಕೆ ವಿನಯ್ ಕ್ಯಾಪ್ಟನ್ ಆದರೆ, ಮತ್ತೊಂದಕ್ಕೆ ಸಂಗೀತಾ ನಾಯಕಿ. ಟಾಸ್ಕ್ ವೇಳೆ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಕಿತ್ತಾಟ ನಡೆದಿದೆ. ‘ಮೈ ಮುಟ್ಟಬೇಡ’ ಎಂದು ಕಾರ್ತಿಕ್ ಅವರು ವಿನಯ್ಗೆ ಎಚ್ಚರಿ ನೀಡಿದ್ದಾರೆ.