ಎಡಗೈಯಲ್ಲಿ ಆರತಿ ತಟ್ಟೆಗೆ ದುಡ್ಡು ಹಾಕಿದ ಐರಾಗೆ ಅಪ್ಪನ ಪ್ರೀತಿಯ ಮಾತು

ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಮೈಸೂರಿನ ನಂಜನಗೂಡಿಗೆ ಭೇಟಿ ನೀಡಿದ್ದಾರೆ. ಮಕ್ಕಳಾದ ಆಯ್ರಾ ಯಶ್​ ಹಾಗೂ ಯಥರ್ವ್​ ಯಶ್​ ಜೊತೆ ಬಂದು ಅವರು ಶ್ರೀಕಂಠೇಶ್ವರನ ದರ್ಶನ ಪಡೆದಿದ್ದಾರೆ. ಆರತಿ ತೆಗೆದುಕೊಂಡ ಬಳಿಕ ಅರ್ಚಕರ ತಟ್ಟೆಗೆ ದಕ್ಷಿಣೆ ಹಾಕುವಾಗ ಆಯ್ರಾ ಎಡಗೈ ಬಳಸಿದಳು. ಆಗ ಮಗಳಿಗೆ ಯಶ್​ ಅವರು ಪ್ರೀತಿಯಿಂದ ತಿಳಿಹೇಳಿದರು. ‘ರೈಟ್​ ಹ್ಯಾಂಡ್​ನಲ್ಲಿ ಹಾಕಬೇಕು ಮಗಳೇ..’ ಎಂದು ಅವರು ಬುದ್ಧಿ ಹೇಳಿದರು.