ಕವಿತಾ ತಮ್ಮ ಇಬ್ಬರು ಮಕ್ಳಳನ್ನು ಅವರಿಗೆ ಪರಿಚಯಿಸಿ; ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಮತ್ತು ಭ್ರಷ್ಟರಲ್ಲದ ತಮ್ಮ ಪತಿಯನ್ನು ಮೇಲಧಿಕಾರಿಗಳು ಬಲಿಪಶು ಮಾಡಿದ್ದಾರೆ ಎಂದು ಹೇಳಿದರು. ಕವಿತಾ ಮತ್ತು ಅವರ ಮಕ್ಕಳಿಗೆ ಸಮಾಧಾನ ಹೇಳಿದ ವಿಜಯೇಂದ್ರ, ಅವರು ಅಧೀರರಾಗುವ ಅವಶ್ಯಕತೆಯಿಲ್ಲ, ಬಿಜೆಪಿ ಅವರೊಂದಿಗಿದೆ ಅಂತ ಭರವಸೆ ನೀಡಿದರು.