ಕಿರುತೆರೆ ನಟ ವಿನಯ್ ಗೌಡ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅದರ ಬೆನ್ನಲ್ಲೇ ನಟಿ ಸಂಗೀತಾ ಶೃಂಗೇರಿ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ದೊಡ್ಮನೆಯಲ್ಲಿ ಅತಿ ಹೆಚ್ಚು ಸದಸ್ಯರಿಂದ ಕಳಪೆ ಎಂಬ ಅಭಿಪ್ರಾಯ ಪಡೆದವರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ನಾಲ್ಕನೇ ವಾರದಲ್ಲಿ ಸಂಗೀತಾ ಅವರಿಗೆ ಕಳಪೆ ಪಟ್ಟ ಸಿಕ್ಕಿರುವುದರಿಂದ ಅವರೀಗ ಜೈಲು ಸೇರಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆದಾಗಿನಿಂದಲೂ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಈಗ ಅದು ಇನ್ನೊಂದು ಹಂತಕ್ಕೆ ಮೇಲೇರಿದೆ. ರಕ್ಷಕ್, ತುಕಾಲಿ ಸಂತೋಷ್, ನಮ್ರತಾ ಗೌಡ, ವಿನಯ್ ಗೌಡ ಸೇರಿದಂತೆ ಬಹುತೇಕರು ತಮ್ಮನ್ನು ಕಳಪೆ ಅಂತ ಹೇಳಿರುವುದು ಸಂಗೀತಾಗೆ ಅಚ್ಚರಿ ತಂದಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟದ ರೋಚಕತೆ ಹೆಚ್ಚುತ್ತಿದೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. 24 ಗಂಟೆಯೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ನೋಡಬಹುದು.