ಸಂಸತ್ತಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗುವುದು: ಪ್ರಹ್ಲಾದ್ ಜೋಶಿ

ಸಂಸತ್ತಿನಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿದ್ದಾರೆ. ನಿನ್ನೆ ನಡೆದ ಅಹಿತಕರ ಘಟನೆಯು ಗೌರವಾನ್ವಿತ ಸಂಸತ್ತಿನ ಸದಸ್ಯರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಗಂಭೀರ ಘಟನೆ ಎಂದು ನಾವೆಲ್ಲರೂ ಒಪ್ಪುತ್ತೇವೆ. ಲೋಕಸಭಾ ಸ್ಪೀಕರ್ ಅವರು ಎಲ್ಲರೊಂದಿಗೆ ಸಭೆ ನಡೆಸಿದರು. ಸಂಸತ್ತಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಹೆಚ್ಚಿನ ಆದ್ಯತೆ ನೀಡುವಂತೆ ಹೇಳಿದ್ದಾರೆ.