ಹೆಚ್ ವಿಶ್ವನಾಥ್ ಸುದ್ದಿಗೋಷ್ಠಿ

ಕೃಷ್ಣ ಅವರ ಸಾವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದರು, ಆದರೆ ಕಾಂಗ್ರೆಸ್ ಅಧಿನಾಯಕಿಯಾಗಿರುವ ಸೋನಿಯ ಗಾಂಧಿಯವರು ಏನನ್ನೂ ಹೇಳದೆ ಮೌನವಾಗಿದ್ದಿದ್ದು ವಿಷಾದಕರ. ಕೃಷ್ಣ ಅವರು ತಮ್ಮ ರಾಜಕೀಯ ಬದುಕಿನ ಸಿಂಹಪಾಲನ್ನು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿಟ್ಟಿದ್ದರು, ಮನುಷ್ಯ ಸತ್ತಾಗ ರಾಜಕಾರಣ ಮಾಡಬಾರದು, ಮಾನವೀಯತೆ ಪ್ರದರ್ಶಿಸಬೇಕು ಎಂದು ವಿಶ್ವನಾಥ್ ಹೇಳಿದರು.