ಜೊಯಿಡಾ ತಾಲೂಕಿನಲ್ಲಿ ಕುಣಬಿ ಸಮುದಾಯದ ಸಾವಿರಾರು ಕುಟುಂಬಗಳು ಗಡ್ಡೆ ಗೆಣಸುಗಳನ್ನೇ ಬೆಳೆದು ಜೀವನ ಸಾಗಿಸುತ್ತಿವೆ. ಪ್ರತೀ ವರ್ಷ ಮೇಳದ ಸಂದರ್ಭ ಮಾತ್ರ ಈ ಗಡ್ಡೆ ಗೆಣಸುಗಳು ಭರ್ಜರಿ ಪ್ರದರ್ಶನ, ಮಾರಾಟ ಕಾಣುತ್ತವೆ. ಆದರೆ, ಉಳಿದ ಸಮಯದ ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ಗೆಡ್ಢೆ ಗೆಣಸು ಬೆಳೆಯುವ ರೈತ ಸಮುದಾಯಕ್ಕೆ ಉತ್ತೇಜನ ನೀಡಬೇಕಿದೆ.