ಚಾಮರಾಜನಗರದಲ್ಲಿ ಡಿಕೆ ಶಿವಕುಮಾರ್

ತಾನು ಉಪ ಮುಖ್ಯಮಂತ್ರಿಯಾಗಿರುವುದರ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷನೂ ಆಗಿರುವವದರಿಂದ ಬಿಜೆಪಿ ನಾಯಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಭೇಟಿಯಾಗುತ್ತಾರೆ ಎಂದು ಹೇಳಿದ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಆಪರೇಶನ್ ಹಸ್ತ ನಡೆಸುವ ಜರೂರತ್ತಿಲ್ಲ ಎಂದರು. ಆದರೆ, ಕಾಂಗ್ರೆಸ್ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡು ಪಕ್ಷದ ತತ್ವ ಸಿದ್ಧಾಂತಗಳಲ್ಲಿ ವಿಶ್ವಾಸವಿರಿಸಿ ಬರುವವರಿಗೆ ಬೇಡ ಅನ್ನಲಾಗಲ್ಲ ಎಂದು ಅವರು ಹೇಳಿದರು.