ವಿರೋಧ ಪಕ್ಷ ಶಾಸಕರ ಪ್ರತಿಭಟನೆ

ಕೈಯಲ್ಲಿ ಪ್ಲಕಾರ್ಡ್ ಗಳನ್ನು ರಾಜಭವನಕ್ಕೆ ಬಂದ ಶಾಸಕರು ರಾಜಭವನದ ಮುಖ್ಯದ್ವಾರದ ಬಳಿ ನಿಂತು ಘೋಷಣೆ ಕೂಗಿದರು. ದೇಶದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ದೇಶದ್ರೋಹಿಗಳನ್ನು ರಕ್ಷಿಸುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ವಜಾ ಮಾಡಿ ವಜಾ ಮಾಡಿ ಕಾಂಗ್ರೆಸ್ ಸರ್ಕಾರವನ್ನು ವಜಾಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಾಜೀನಾಮೆ ನೀಡಿ ಎಂದು ಘೋಷಣೆಗಳನ್ನು ಕೂಗಿದರು.