ಉಡುಪಿಯ ವಂಡ್ಸೆ ಸ್ವಚ್ಛತೆಗೆ ಮಾದರಿ ಗ್ರಾಮ

ಬಯೋಕಾನ್‌ನ ಮುಖ್ಯಸ್ಥೆ ಕಿರಣ್ ಮಜುಂದರ್ ಶಾ ಅವರು ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯತಿಯ ಅದ್ಭುತ ಸ್ವಚ್ಛತಾ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ಅವರು ಟ್ವಿಟರ್‌ನಲ್ಲಿ ವೀಡಿಯೋ ಹಂಚಿಕೊಂಡು, ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಗ್ರಾಮದ ಮಾದರಿಯನ್ನು ಅನುಸರಿಸಲು ಮನವಿ ಮಾಡಿದ್ದಾರೆ.