2009ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ನಿಧಿ ಸುಬ್ಬಯ್ಯ ಆರಂಭದಲ್ಲಿಯೇ ಯಶಸ್ಸು, ಜನಪ್ರಿಯತೆ ಗಳಿಸಿಕೊಂಡ ನಟಿ. ವೃತ್ತಿಯ ಉತ್ತುಂಗದಲ್ಲಿದ್ದಾಗಲೇ 2012ರ ಬಳಿಕ ಚಿತ್ರರಂಗದಿಂದ ನಾಲ್ಕು ವರ್ಷಗಳ ಕಾಲ ದೂರಾಗಿ 2016ರಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದರು. ಇದೀಗ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇದೀಗ 'ಶೆಫ್ ಚಿದಂಬರ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ನಾಯಕ.