ಹತ್ಯೆಗೀಡಾಗಿರುವ ಶಿವಪ್ರಕಾಶ್ ತಾಯಿ ನೀಡಿರುವ ದೂರಿನನ್ವಯ ಶಾಸಕ ಭೈರತಿ ಬಸವರಾಜ, ಜಗದೀಶ್, ಕಿರಣ್, ವಿಮಲ್, ಮತ್ತು ಅನಿಲ್ ವಿರುದ್ಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ. ಜಮೀನು ವಿಷಯಕ್ಕೆ ಕೊಲೆ ನಡೆದಿದೆ ಎಂದು ದೂರಿನಲ್ಲಿ ದಾಖಲಾಗಿದ್ದರೂ ಬಸವರಾಜ ಮಾತ್ರ ಯಾವ ಜಮೀನು ಅನ್ನೋದೇ ತನಗೆ ಗೊತ್ತಿಲ್ಲ ಎಂದು ಸಿಡಿಮಿಡಿಗೊಂಡು ಹೇಳುತ್ತಾರೆ.