ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಅವರು ತುಮಕೂರಿನ ಹಾಲು ಮತ್ತು ತರಕಾರಿಯನ್ನು ತಮ್ಮ ಕ್ಷೇತ್ರದ ಕುದೂರಿನಲ್ಲಿ ಮಾರಲು ಬಿಡೋದಿಲ್ಲ ಅಂತ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಅವರು ಯಾಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ, ವಿಚಾರಿಸುತ್ತೇನೆ ಎಂದ ಪರಮೇಶ್ವರ್ ಸ್ವಾಮೀಜಿಗಳ ವಿರುದ್ಧ ಎಫ್ಐಅರ್ ದಾಖಲಾಗಿದ್ದೂ ಗೊತ್ತಿಲ್ಲವೆಂದರು.